
2nd April 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಇಂದಿನ ಆಧುನಿಕತೆಯಲ್ಲಿ ಮಹಿಳೆಯರು ಅನೇಕ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ತೋರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸುಕನ್ಯಾ ರೇಷ್ಮೆ ಹೇಳಿದರು. ಪಟ್ಟಣದ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ ಆರ್ಬಿಟ್ ಸಂಸ್ಥೆ ಮತ್ತು ತಾಲೂಕು ಜನಜಾಗೃತಿ ಒಕ್ಕೂಟದ ವತಿಯಿಂದ ಈಚೆಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷರಿಗಿಂತ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ, ಆದರೆ ಮಹಿಳೆಯರು ಸಾಗಬೇಕಾಗಿರುವ ಹಾದಿ ಇನ್ನು ಸಾಕಷ್ಟು ಇದೆ, ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಕುಟುಂಬದ ಕಣ್ಣಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಮಹಿಳೆಯರ ಹೊರತಾಗಿ ಈ ಪ್ರಪಂಚವೇ ಕಲ್ಪಿಸಿಕೊಳ್ಳುವುದು ಕಷ್ಟ ಸುಮಾರು ೩೦ ವರ್ಷಗಳಿಂದ ಆರ್ಬಿಟ್ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಆರ್ಬಿಟ್ ಸಂಸ್ಥೆಯ ವಿಮಲಾಬಾಯಿ ಮಾತನಾಡಿ, ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಆರ್ಬಿಟ್ ಸಂಸ್ಥೆಯ ಕೊಡುಗೆ ದೊಡ್ಡದಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ನ ಸಹಾಯಕ ಅಭಿವೃದ್ಧಿ ಅಧಿಕಾರಿ ಪ್ರತಾಪಸಿಂಗ ರಾಜಪುತ್ ಮಾತನಾಡಿದರು.
ಸ್ಥಳೀಯ ನಿರ್ದೇಶಕ ವಂದನಿಯ ಫಾಧರ ರೋಕಿ ಮಾತನಾಡಿದರು. ಆರ್ಬಿಟ್ ಸಂಸ್ಥೆಯ ನಿರ್ದೇಶಕರಾದ ವಂದನೆಯ ಫಾದರ್, ವಿಕ್ಟರ್ ವಾಸ್, ಸಹ ನಿರ್ದೇಶಕರಾದ ಫಾದರ್ ವಿಜಯ್, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಸಹಾಯಕ ಕೃಷಿ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ, ಉಪನ್ಯಾಸಕರಾದ ವಿಜಯಲಕ್ಷ್ಮಿ ಗಡ್ಡೆ, ಫಾದರ್ ರೇಜಿ, ಫ್ರಾನ್ಸಿಸ್. ಸಿಸ್ಟರ್ ಶೀಲಾ, ಯಜ್ಞ, ಹಾಗೂ ಕ್ರಿಸ್ಟಿನ, ಆರ್ಬಿಟ್ ಸಂಸ್ಥೆಯ ಕಾರ್ಯಕರ್ತರಾದ ನಿರ್ಮಲ, ಸುಜಾತ, ಪ್ರಭಾವತಿ ಇದ್ದರು.
ರಾಜೇಶ್ವರಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.ರಾಣಿ ಸ್ವಾಗತಿಸಿದರು. ಅರ್ಚನಾ, ಸುಲೋಚನಾ ನಿರೂಪಿಸಿದರು. ಇಂದುಮತಿ ವಂದಿಸಿದರು.
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ